ಯಾವ ಮೈ ಬಣ್ಣಕ್ಕೆ ಯಾವ ತರದ ಸೀರೆ ಚಂದ ಆಗುತ್ತೆ? ಇಲ್ಲಿದೆ ಟಿಪ್ಸ್

ಸೀರೆ ಅಂದ್ರೆ ಹೆಣ್ಣುಮಕ್ಕಳಿಗೆ ಇಷ್ಟವಾಗದೇ ಇರೋದಕ್ಕೆ ಸಾಕಷ್ಟು ಕಾರಣ ಸಿಗುತ್ತೆ. ಆದರೆ ಅದಕ್ಕಿಂತ ಹತ್ತು ಪಟ್ಟು ಕಾರಣ, ಸೀರೆಯನ್ನು ಇಷ್ಟ ಪಡೋದಕ್ಕೆ ಸಿಗುತ್ತೆ. ಆದರೂ ಇಷ್ಟಪಟ್ಟುಕೊಂಡ ಸೀರೆ ಚೆನ್ನಾಗಿ ಕಾಣೋದಿಲ್ಲ ಅಂದರೆ ಮನಸ್ಸಿಗೆ ತುಂಬಾ ನೋವುವಾಗುತ್ತದೆ. ಅದಕ್ಕಾಗಿ ನಮ್ಮ ಮೈ ಬಣ್ಣಕ್ಕೆ ಯಾವ ಥರ ಸೀರೆ ಚಂದ ಹಾಗೂ ಯಾವ ತರದ ಸೀರೆ ಉಟ್ಟುಕೊಂಡರೆ ಚಂದ ಆಗುತ್ತೆ ಅಂತ ಮೊದಲೇ ಗೊತ್ತಿದ್ರೆ ಸಾಕು. ಗೊತ್ತಿಲ್ಲದಿದ್ದರೆ ಇಲ್ಲಿದೆ ಅಂಥಾ ಟಿಪ್ಸ್.



ಎಣ್ಣೆಗೆಂಪು ಬಣ್ಣ:
ಅತ್ತ ಕಪ್ಪು ಅಲ್ಲ, ಇತ್ತ ಬಿಳಿಯೂ  ಅಲ್ಲ ಅನ್ನೋ ಥರದ ಹುಡುಗಿಯರಿಗೆ ಕೆಂಪು, ಕಡು ನೀಲಿ, ನೇರಳೆ, ಆಲಿವ್ ಹಸಿರು ಮೈ ಬಣ್ಣದವರಿಗೆ ಚೆನ್ನಾಗಿ ಕಾಣುತ್ತದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟಿನವರಿಗೆ :
ಇದು ಆಲಿವ್ ಕಲರ್ ಅಂತ ಕರೆಯೋ ಬಣ್ಣ. ಸ್ವಲ್ಪ ಗೋಧಿ ಬಣ್ಣಕ್ಕೆ ಹತ್ತಿರ. ಕೊಂಚ ಹಳದಿ ಮಿಶ್ರಿತ ಮೈ ಬಣ್ಣ. ಮೈ ಬಣ್ಣ ಹೊಂದಿರುವವರಿಗೆ ನಿಯಾನ್ನಿಂದ ಪಾಸ್ಟಲ್ಗಳವರೆಗೆ, ಲೋಹೀಯದಿಂದ ನ್ಯೂಟ್ರಲ್ನಂತಹ ಯಾವುದೇ ಬಣ್ಣವನ್ನು ಧರಿಸಬಹುದುನಿಮ್ಮ ಮೈ ಬಣ್ಣಕ್ಕೆ ಸಾಮಾನ್ಯವಾಗಿ ಯಾವ ಬಣ್ಣದ ಸೀರೆಯೂ ಚೆನ್ನಾಗಿ ಕಾಣುತ್ತೆ. ಗಾಢ ಬಣ್ಣದ ಸೀರೆ ಸಖತ್ತಾಗಿ ಕಾಣುತ್ತೆವೈನ್ ರೆಡ್, ಸಾಸಿವೆಯ ಹಳದಿ, ಪೀಚ್ ಪಿಂಚ್, ಹವಳದ ಬಣ್ಣ, ಆರೆಂಜ್ನಲ್ಲಿ ಕೆಲವು ಶೇಡ್ ಗಳು ಚೆನ್ನಾಗಿರುತ್ತವೆ.

ನಸು ಗುಲಾಬಿ ಕೆನ್ನೆಯ ಚೆಲುವೆಯರಿಗೆ:
ಮೈಬಣ್ಣ ಹೊಂದಿರುವವರಿಗೆ ಆಕಾಶ ನೀಲಿ, ಅಕ್ವಾ ಗ್ರೀನ್, ಸ್ವಿಮ್ಮಿಂಗ್ ಪೂಲ್ ಬಣ್ಣ, ಬೂದು ಬಣ್ಣದ ಸೀರೆ  ಚೆನ್ನಾಗಿ ಕಾಣಿಸುತ್ತದೆ.

ಗಾಢ ಬಣ್ಣ, ಕಪ್ಪು, ಚಾಕೋಲೇಟ್ ಬಣ್ಣ:
ಇದು ಹೆಲ್ದಿ ಕಲರ್ ಅಂತರ್ಥ. ಚರ್ಮದ ಆರೋಗ್ಯ ಕಾಪಾಡುವ ಮೆಲನಿನ್ ಪ್ರಮಾಣ ಹೆಚ್ಚಿದ್ದರೆ ಚರ್ಮದ ಬಣ್ಣ ಕಪ್ಪು ಅಥವಾ ಗಾಢವಾಗಿರುತ್ತೆ. ಬಣ್ಣ ಹೊಂದಿರುವವರಿಗೆ ಅಲರ್ಜಿ ಇತ್ಯಾದಿ ಸಮಸ್ಯೆ ಬರೋದಿಲ್ಲ. ದುರಂತ ಅಂದರೆ ಬಣ್ಣವನ್ನು ದೂರುವವರೇ ಹೆಚ್ಚು ಜನ. ಆದರೆ ಈಗ ಫ್ಯಾಶನ್ ಜಗತ್ತಿನಲ್ಲಿ ಕಪ್ಪು, ಚಾಕ್ಲೇಟ್ ಬಣ್ಣದವರಿಗೆ ಹೆಚ್ಚು ಡಿಮ್ಯಾಂಡ್. ನೇರಳೆ, ಗುಲಾಬಿ, ನೀಲಿ ಬಣ್ಣಗಳು ಇವರಿಗೆ ಚೆಂದ ಕಾಣುತ್ತವೆ. ಬಿಳಿ ಅಷ್ಟಾಗಿ ಹೊಂದಿಕೊಳ್ಳೋದಿಲ್ಲ.